ಗೆಳತಿ
======
ಸ್ನೇಹವೆಂಬ ಲೋಕದಲಿ
ಕಂಡೆನೊಂದು ಕಿರಣವನು
ಅದು ಬೆಳಕು ಕೊಡುವುದೇನೋ
ಎಂದುಕೊಂಡು ಹರುಶಗೊಂಡೆನು ನಾನು
ಗೆಳತಿಯೊಬ್ಬಳು ಸಿಕ್ಕ ಸಂತಸದಲಿ
ಮರೆಯುತಿರುವೆನು ಗತಿಸಿತ ಘಟನೆಗಳನು
ಈ ಸ್ನೇಹ ಶಾಶ್ವಥವಾಗಲೆಂದು -
ಆಶಿಸುವ ಸಮಯದಲಿ ದೂರವಾಗುತಿಹಳು ಆಕೆಯು
ಸೃಶ್ಟಿಯಾದ ಗೆಳೆತನಕೆ
ಇರುವುದೆ ವಿರಾಮ?
ಬೆಳಕು-ಕತ್ತಲೆಯ ಸ್ನೇಹವೆ
ರವಿ-ಚಂದ್ರಮನ ಸಂಗಮ.
- ಪ್ರಸನ್ನ ಎಸ್ ವಿ
No comments:
Post a Comment