Saturday, 2 February 2008

Dreams in the form of Poems

ಪ್ರಿಯ-ತಮೆ

ಎಲೆ ಹೂವೇ...
ಎಕಿ೦ದು ನೀ ನನಗೆ ಪ್ರಿಯವಾದೆ?
ನಿನ್ನ ಹೊಳಪನು ಕ೦ಡು...
ನಿನ್ನ ರೂಪವನು ಕ೦ಡು...
ನಾ ನಿನಗೆ ಮರುಳಾದೆ.

ನೀ ನನ್ನ ಮನದಲಿ
ಪ್ರೀತಿಯ ವೀಣೆಯನು ನುಡಿಸುತಿರುವೆ.
ನನ್ನ ಹೃದಯದ ಸುತ್ತಾ
ಪ್ರೇಮದ ಬಲೆಯನು ಹರಡಿರುವೆ.

ಹೇಳುವ೦ತವಳಾಗು ಓ ಬಾಲೆ
ಏಕಾಗಿ ನೀ ನನಗೆ ಪ್ರೀತಿಯ ಸ್ವಾದವನು ತೋರಿಸಿದೆ?
ಏಕಾಗಿ ನನ್ನ ತನು-ಮನವನು
ನಿನಗಾಗಿ ಥಹ-ಥಹಿಸುವ ಹಾಗೆ ಮಾಡಿದೆ?

ಈ ಹೂವಿನ ಸ್ವಾದವನು
ಸವಿಯುವ ದು೦ಭಿ ನಾನಾಗಬಾರದೇ?
ಈ ಜೀವನದಲಿ ನಿನ್ನೊಡನೆ
ಸಾಗುವ ಋಣ ನನಗಿರಬಾರದೇ?

- ಪ್ರಸನ್ನ ಎಸ್ ವಿ

No comments: